Ephesians 4

ಕ್ರಿಸ್ತನ ದೇಹದಲ್ಲಿನ ಐಕ್ಯತೆ

1ನೀವು ದೇವರಿಂದ
4:1 ರೋಮಾ. 8:28:
ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ
4:1 ಕೊಲೊ. 2:6; 1 ಥೆಸ. 2:12; ಫಿಲಿ. 1:27:
ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ
4:1 ಎಫೆ. 3:1:
ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
2ನೀವು ಪೂರ್ಣ
4:2 ಫಿಲಿ. 2:3; ಕೊಲೊ. 3:12; 1 ಪೇತ್ರ. 3:5.
ವಿನಯ, ಸಾತ್ವಿಕತ್ವಗಳಿಂದಲೂ
4:2 ಕೊಲೊ. 1:11:
ದೀರ್ಘಶಾಂತಿಯಿಂದಲೂ ಕೂಡಿದವರಾಗಿ,
4:2 ಕೊಲೊ. 3:13:
ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
3
4:3 ಕೊಲೊ. 3:14,15:
ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.

4ನೀವು ಕರೆಯಲ್ಪಟ್ಟಾಗ
4:5 ಎಫೆ. 1:18:
ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ,
4:4 ಎಫೆ. 2:16:
ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು,
4:4 ಎಫೆ. 2:18:
ಒಬ್ಬನೇ ಆತ್ಮನನ್ನು ಹೊಂದಿದವರು,
5ನಿಮ್ಮೆಲ್ಲರಿಗೂ
4:5 ಜೆಕ. 14:9; 1 ಕೊರಿ. 8:6:
ಕರ್ತನು ಒಬ್ಬನೇ,
4:5 ಎಫೆ. 4:13; ಯೂದ. 3:
ನಂಬಿಕೆಯು ಒಂದೇ,
4:5 ಗಲಾ. 3:27,28:
ದೀಕ್ಷಾಸ್ನಾನ ಒಂದೇ,
6
4:6 1 ಕೊರಿ. 12:5,6:
ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ.
4:6 ರೋಮಾ. 9:5:
ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.

7ಆದರೆ
4:7 ರೋಮಾ. 12:3; ಎಫೆ. 4:16; 1 ಕೊರಿ. 12:7; ಮತ್ತಾ 25 15:
ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ.
8ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ,

4:8 ಕೀರ್ತ. 68:18:
<<ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ
4:8 ನ್ಯಾಯ. 5:12; ಕೊಲೊ. 2:15:
ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ
ಮನುಷ್ಯರಿಗೆ ವರಗಳನ್ನು ಕೊಟ್ಟನು.>>

9
4:9 ಯೋಹಾ 3:13:
<<ಏರಿಹೋದನೆಂದು>> ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ?
10ಇಳಿದು ಬಂದಾತನು,
4:10 ಎಫೆ. 1:23:
ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ
4:10 ಇಬ್ರಿ. 4:14; 7:26; 9:24:
ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ.

11ಆತನು
4:11 1 ಕೊರಿ. 12:28:
ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ,
4:11 ಅ. ಕೃ. 21:8; 2 ತಿಮೊ. 4:5:
ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು
4:11 ಯೆರೆ. 3:15; ಅ. ಕೃ 20:28:
ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು.
12ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು,
4:12 ಎಫೆ. 1:23:
ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ,
13ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ,
4:13 1 ಕೊರಿ. 12:27; ಎಫೆ. 4:16,29:
ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು.

14ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು
4:14 ಮತ್ತಾ 11:7; ಇಬ್ರಿ 13:9; ಯಾಕೋಬ. 1:6; ಯೂದ. 12.
ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,
15ಆದರೆ
4:15 1 ಯೋಹಾ 3:18.
ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ
4:15 ಎಫೆ. 2:21
ಎಲ್ಲಾ ವಿಷಯಗಳಲ್ಲಿಯೂ
4:15 ಎಫೆ. 1:22:
ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ.
16
4:16 ಕೊಲೊ. 2:19:
ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು,
4:16 ವ. 7 ನೋಡಿರಿ
ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.

ಕ್ರಿಸ್ತನಲ್ಲಿ ಹೊಸ ಜೀವನ

(ಕೊಲೊ. 3:5-17)

17ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ
4:17 ಎಫೆ. 4:22; 2:1-3 ಕೊಲೊ. 3:7; 1 ಪೇತ್ರ. 4:3:
ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು.
4:18 ರೋಮಾ. 1:21; ಕೊಲೊ. 2:18:
ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.
18
4:18 ರೋಮಾ. 11:10:
ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು
4:18 ಮಾರ್ಕ 3:5:
ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ
4:18 ಎಫೆ. 2:12:
ದೂರವಾಗಿದ್ದಾರೆ.
19ಅವರು ಲಜ್ಜೆಗೆಟ್ಟವರಾಗಿ
4:19 ರೋಮಾ. 1:24,26,28:
ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.

20ನೀವಾದರೋ
4:20 ಮೂಲ, ಕ್ರಿಸ್ತನನ್ನು. ಮತ್ತಾ 11:29:
ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ.
21ಆತನಿಂದಲೇ ಕೇಳಿ
4:21 ಕೊಲೊ. 2:7:
ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ.
22ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ
4:22 ಕೊಲೊ. 3:8; ಇಬ್ರಿ. 12:1; ಯಾಕೋಬ. 1:21; 1 ಪೇತ್ರ. 2:1:
ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ
4:22 ರೋಮಾ. 6:6; ಕೊಲೊ. 3:9:
ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು.

23
4:23 ರೋಮಾ. 12:2:
ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ,
4:23 ರೋಮಾ. 16:4:
ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
24ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ
4:24 ಎಫೆ. 2:10:
ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.

25ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು
4:25 ಜೆಕ. 8:16; ಕೊಲೊ. 3:9:
<<ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.>> ಏಕೆಂದರೆ
4:25 ರೋಮಾ. 12:5:
ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ.
26
4:26 ಕೀರ್ತ. 4:4.
<<ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,>> ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ.
27
4:27 ಯಾಕೋಬ. 4:7:
ಸೈತಾನನಿಗೆ ಅವಕಾಶಕೊಡಬೇಡಿರಿ.

28ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ
4:28 1 ಥೆಸ. 4:11; 2 ಥೆಸ. 3:8, 11:
ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.
29
4:29 ಎಫೆ. 5:4; ಕೊಲೊ. 3:8; ಮತ್ತಾ 12:34:
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ
4:29 ಕೊಲೊ. 4:6:
ಕೇಳುವವರಿಗೆ ಹಿತವಾಗಿ ತೋರುವುದು.
30
4:30 ಯೆಶಾ. 63:10; 1 ಥೆಸ. 5:19:
ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ
4:30 ಎಫೆ. 1:13:
ಮುದ್ರೆ ಹೊಂದಿದ್ದೀರಲ್ಲಾ.

31
4:31 ಕೊಲೊ. 3:8:
ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ.
4:32 ಕೊಲೊ. 3:12,3; 1 ಪೇತ್ರ. 3:8:
ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು
4:32 2 ಕೊರಿ. 2:7,10; ಮತ್ತಾ 6:14:
ಕ್ಷಮಿಸಿರಿ.

32

Copyright information for KanULB